ಅಭಿಪ್ರಾಯ / ಸಲಹೆಗಳು
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಬಗ್ಗೆ

   1966 ರಲ್ಲಿ ಅಸ್ಥಿತ್ವಕ್ಕೆ ಬಂದಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಸಂಯೋಜಿತ ಶಾಲೆಗಳ 10ನೇ ತರಗತಿಯ ಮುಖ್ಯ ಪರೀಕ್ಷೆಯನ್ನು ನೆಡೆಸುವುದರ ಜೊತೆಗೆ ಸಂಗೀತ, ಡಿ.ಎಡ್, ವಾಣಿಜ್ಯದಂತಹ ಇತರೆ 12 ಪರೀಕ್ಷೆಗಳನ್ನು ನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿ ಮಂಡಳಿಯ ಮುಖ್ಯ ಕಛೇರಿಯಿದ್ದು ಬೆಳಗಾಂ, ಕಲಬುರ್ಗಿ ಮತ್ತು ಮೈಸೂರುಗಳಲ್ಲಿ ವಿಭಾಗೀಯ ಕಛೇರಿಗಳಿವೆ, ಬೆಂಗಳೂರಿನ ಮಲ್ಲೇಶ್ವರಂನ ಮುಖ್ಯ ಕಛೇರಿಯಲ್ಲಿಯೇ ಬೆಂಗಳೂರು ವಿಭಾಗದ ಕಛೇರಿಯೂ ಇದೆ.

 

   ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಮಂಡಳಿಯ ವತಿಯಿಂದ ಜರುಗುವ 10ನೇ ತರಗತಿಯ ಪರೀಕ್ಷೆಗಳಿಗೆ ಸುಮಾರು 8.5 ಲಕ್ಷ ಮಕ್ಕಳು ಹಾಗೂ ಜೂನ್ ತಿಂಗಳಿನಲ್ಲಿ ನಡೆಯುವ ಪೂರಕ ಪರೀಕ್ಷೆಗಳಿಗೆ ಸುಮಾರು 2.2 ಲಕ್ಷ ಮಕ್ಕಳು ಹಾಜರಾಗುತ್ತಿದ್ದಾರೆ.

 

   ನಿರ್ದೇಶಕರು (ಪರೀಕ್ಷೆಗಳು) ರವರು ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಉಸ್ತುವಾರಿಯನ್ನು ನೋಡಿಕೊಂಡರೆ ಇತರೆ ಪರೀಕ್ಷೆಗಳ ನಿರ್ವಹಣೆಯನ್ನು ನಿರ್ದೇಶಕರು (ಇತರೆ ಪರೀಕ್ಷೆಗಳು) ನೋಡಿಕೊಳ್ಳುತ್ತಾರೆ.ಪರೀಕ್ಷಾ ವಿವರಗಳಿಗಾಗಿ www.sslc.karnataka.gov.in ಜಾಲತಾಣವನ್ನು ಸಂಪರ್ಕಿಸುವುದು.

 

   ಮಂಡಳಿಯಲ್ಲಿ ಆಡಳಿತ ವಿಭಾಗ, ಲೆಕ್ಕಪತ್ರ ಶಾಖೆ,ಟೆಂಡರ್ ಗಳ ನಿರ್ವಹಣೆ, ಮೌಲ್ಯಮಾಪನ ಹಾಗೂ 34 ಜಿಲ್ಲೆಗಳಿಗಾಗಿ 09 ಪರಿಶೀಲನಾ ಶಾಖೆಗಳಿವೆ. ಗಣಕ ಶಾಖೆಯು ಪರೀಕ್ಷೆಗಳ ನಿರ್ವಹಣೆಯನ್ನು ಗಣಕೀಕೃತವಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

 

  2017-18 ನೇ ಸಾಲಿನಿಂದ ಮಂಡಳಿಯ ಪರೀಕ್ಷೆಗಳಿಗೆ ಸಂಬಂಧಿಸಿದ ಅನೇಕ ಚಟುವಟಿಕೆಗಳನ್ನು ಡಿಜಿಟಲೀಕರಿಸಲಾಗುತ್ತಿದೆ. ಪರೀಕ್ಷೆಗಳಿಗೆ ನೋಂದಣಿ, ಪ್ರವೇಶ ಪತ್ರಗಳ ವಿತರಣೆ ಮತ್ತು ಫಲಿತಾಂಶ ಪ್ರಕಟಣೆಯನ್ನು ಅಂತರ್ಜಾಲ ಆಧಾರಿತ ಸೇವೆಗಳನ್ನಾಗಿ ಪರಿವರ್ತಿಸಲಾಗಿದೆ. ಮೌಲ್ಯಮಾಪನ ಕೇಂದ್ರಗಳಿಂದ ಅಂಕಗಳನ್ನು ಸಹ ಅತ್ಯಾಧುನಿಕ ವಿಧಾನದಲ್ಲಿ ಅಂತರ್ಜಾಲದ ಮೂಲಕ ಮಂಡಳಿಗೆ ರವಾನಿಸಲಾಗುತ್ತಿದ್ದು ಫಲಿತಾಂಶ ಪ್ರಕಟಣೆಯನ್ನು ಕ್ಷಿಪ್ರಗತಿಯಲ್ಲಿ ನಿರ್ವಹಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗೆ ಎಸ್.ಎಂ.ಎಸ್ ಸಂದೇಶದ ಮೂಲಕ ಫಲಿತಾಂಶಗಳನ್ನು ನೀಡಲಾಗುತ್ತಿದೆ. ಆನ್ ಲೈನ್ ನಲ್ಲಿ ವಲಸೆ ಪ್ರಮಾಣ ಪತ್ರ , ಅಂಕಪಟ್ಟಿಯ ನೈಜತೆ ಪರಿಶೀಲನೆ , ಹಿಂದಿನ ವರ್ಷಗಳ ಎರಡನೇ/ಮೂರನೇ/ನಾಲ್ಕನೇ /ಅನುತ್ತೀರ್ಣ ಅಂಕಪಟ್ಟಿ ನೀಡಿಕೆ, ಉತ್ತರ ಪತ್ರಿಕೆಗಳ ಛಾಯಾಪ್ರತಿ , ಮರುಎಣಿಕೆ ಹಾಗೂ ಮರುಮೌಲ್ಯಮಾಪನ ಸೇವೆಗಳನ್ನು ಪ್ರಗತಿ-10 ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ಡಿಜಿಲಾಕರ್ ಆಪ್ ಬಳಸಿ ಅಂಕಪಟ್ಟಿಗಳನ್ನು ಡೌನ್ ಲೋಡ್ ಮಾಡಿಕೊಳ್ಳವ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ.

 

  ಕರ್ನಾಟಕ ಶಾಲಾ ಗುಣಮಟ್ಟ, ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಮಂಡಳಿಯ ಪ್ರಮುಖ ವಿಭಾಗವಾಗಿದೆ. ಈ ವಿಭಾಗವು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ವಿಭಾಗಗಳ ಶಿಕ್ಷಣದ ಗುಣಮಟ್ಟವನ್ನು ವಾರ್ಷಿಕ ಸಮೀಕ್ಷಾ ಕಾರ್ಯಗಳ ಮೂಲಕ ನಿರ್ವಹಿಸುತ್ತಿದೆ.

 

   ಹೆಚ್ಚಿನ ವಿವರಗಳಿಗೆ ಹಾಗೂ ಸೇವೆಗಳಿಗಾಗಿ ಮಂಡಳಿಯ ಜಾಲತಾಣವನ್ನು ಅವಲೋಕಿಸಬಹುದಾಗಿದೆ. ನಮ್ಮನ್ನು ಸಂಪರ್ಕಿಸಿ ಮೆನು ಮೂಲಕ ತಮ್ಮ ಅಭಿಪ್ರಾಯಗಳನ್ನು ಸಂಬಂಧಿಸಿದ ಶಾಖೆಗಳಿಗೆ ಇ-ಮೇಲ್ ಮೂಲಕ ಕಳುಹಿಸಬಹುದಾಗಿದೆ.

Last Updated : 30-12-2020 01:47 PM
Modified By : Admin


ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

  • ನಮ್ಮ ಬಗ್ಗೆ
  • ಜಾಲನಕ್ಷೆ
  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು
  • ಗೌಪ್ಯತಾ ನೀತಿ
  • ಸಹಾಯ
  • ಪರದೆ ವಾಚಕ
  • ಮಾರ್ಗಸೂಚಿಗಳು
  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ